Wednesday, February 22, 2012

ಮಿಸ್ ಕಾಲ

ನಿನ್ನ ಮಿಸ್ ಕಾಲಿನಲ್ಲಿಯು ಮಾಯೆಯಿದೆ
ನಿನ್ನ ಎಸ್ಸೆಮ್ಮೆಸ್ಸ್ ನಲ್ಲಿಯೂ ದಿನರಾತ್ರಿಯಿದೆ
ಆಗೀಗಲಾದರು ಫೋನ್ ಮಾಡು
ನಿನ್ನ ಚಮತ್ಕಾರದ ಧನಿಯ ಕೇಳಬೇಕಿದೆ.

Nanna sneha.

Nanna ಸ್ನೇಹ ರೇಮಂಡ್ ನಂತಲ್ಲ, ೧೯೨೫ ರಿಂದ
ಪೆಪ್ಸಿಯನ್ತೆಯು ಅಲ್ಲ, ಏ ದಿಲ್ ಮಾಂಗೆ ಮೋರ್ ಎನ್ನಲು
ಆದರೆ ಎಲ್. ಐ. ಸಿ.ಯಂತೆ
ಜೀವನದ ಜೊತೆಜೊತೆಗೂ, ಜೀವನದ ನಂತರವೂ.

ಮಧುರ ಸ್ನೇಹ

ನಮ್ಮೊಳಗಿನ ಈ ಮಧುರ ಸ್ನೇಹ
ಸದಾ ಕಾಲ ನಗುತಿರಲಿ
ಮರುಜನ್ಮವೊಂದಿದ್ದರೆ ಮತ್ತೆ ಮತ್ತೆ ನನಗೆ ನಿಮ್ಮ ಸ್ನೇಹ ಸದಾ ಸಿಗಲಿ

ಸಾಲ ಮರುಪಾವತಿ

ಕಾರು ಸಾಲ ಮರುಪಾವತಿ ಮಾಡದೆ ಇದ್ದುದ್ದಕ್ಕೆ ಬ್ಯಾಂಕ್ನವರು ಕಾರನ್ನು ವಾಪಸ್ ತೆಗೆದುಕೊಂಡು ಹೋದಾಗ, ಮದುವೆಗೂ ಸಾಲ ಮಾಡಬಾರದಿತ್ತೆ ಅನ್ನಿಸಿತ್ತು ತಿಂಮನಿಗೆ!!!

ಅಮ್ಮನಿಗೆ ಕಂದನ ತುಂಬಾ ಸೂಕ್ತಮತ್ತು ಪ್ರೀತಿಯ ಮಾತುಗಳು.

“ನಿನ್ನನ್ನು ತೋರಿಸಿಕೊಟ್ಟಿದ್ದಕ್ಕೆ ನಿನಗಿಂತ ನಾನು ದೇವರನ್ನ ಹೆಚ್ಚುಪ್ರೀತಿಸಲೆ ಅಥವಾ
ದೇವರನ್ನ ತೋರಿಸಿಕೊಟ್ಟಿದ್ದಕ್ಕೆ ದೇವರಿಗಿಂತ ನಿನ್ನನ್ನು ನಾನು ಹೆಚ್ಚು ಪ್ರೀತಿಸಲೆ”